ಹುಟ್ಟಿನಿಂದ ಸುಂದರತೆಯ ತೋರಿಸುತಿಹ ಪ್ರಿಯದರ್ಶಿನಿ
ಇವಳಲ್ಲಿ ಕಾಣುತಿಹೆನು ನಾ ಜಗವಂದಿನಿ
ಮೋಹ ಪಾಶದಲಿ ಸಿಲುಕಿಸಿದ ಬಂಧಿನಿ
ಕೆಡುಕು ಕುಹಕಗಳಿಗೆ ಉಲ್ಕೆಯಾಗುವ ದಾವಾಗ್ನಿ
ಅಂದು ಹುಟ್ಟಿದುದು ಪ್ರಿಯದರ್ಶಿನಿ ಇಂದಿರಾ
ಆಕೆಯ ಲಕ್ಷಣಗಳನೇ ಹೊಂದಿರುವ ಈ ಸುಂದರಾ
ಬೆಳೆಯುತಿಹಳು ಶುಕ್ಲ ಪಕ್ಷದ ಚಂದಿರಾ
ಮನೆಯಾಯಿತೊಂದು ದೇವತಾ ಮಂದಿರಾ
ಹುಟ್ಟಿದ ಇನ್ನೊಬ್ಬ ಸುಂದರಿ ಸುಸ್ಮಿತಾ ಸೇನ
ಅವಳಂತೆ ಇವಳೂ ತುಂಬಿದಳು ಮನೆ ಮಂದಿಗಳ ಮನ
ಮನೆಯಲಿ ತೂರದ ಸಂದುಗೊಂದುಗಳಿಲ್ಲ
ಮನಗಳಲಿ ಬೇರಿಳಿಯದ ಬಿಳಲುಗಳಿಲ್ಲ
ಸೃಷ್ಟಿಕರ್ತನಿಗೆ ಸನಿಹವಾದವಳು ಮನಸಾ
ಅಪ್ಪ ಅಮ್ಮರಿಗೆ ಪ್ರಿಯವಾದವಳು ಮಾನಸಾ
ಪ್ರತಿನಿತ್ಯ ಮನೆಯಲ್ಲಿ ನಡೆದಿಹುದು ಜಲಸಾ (celebration)
ಕೈ ಹಾಕುವಳು ಯಾವುದೇ ಆಗಲಿ ಕೆಲಸ
ಈ ಪುಟ್ಟಮ್ಮನಿಗೆ ತುಂಬಿತು ವರುಷ ಹದಿನೇಳು
ತೋರಿಸಿದಳು ಎಲ್ಲಿಹುದು ಜೀವನದ ಬೀಳು
ಆಗಾಗ ತೋರುವಳು ತನ್ನ ಗೋಳು
ಹಿಂದೆಯೇ ನಕ್ಕು ನಗಿಸಿ ಎಳೆವಳು ಕಾಲು
ಇಂತಹ ಮಗಳಿಗೆ ಹುಟ್ಟಿದ ಹಬ್ಬದ ಸಂದರ್ಭದಲ್ಲಿ
ಅಪ್ಪನಿಂದೊಂದು ಪುಟ್ಟ ಉಡುಗೊರೆ.
ಜೊತೆಗೆ ಸುಖ ದುಃಖಗಳನು ಸಮನಾಗಿ ಸ್ವೀಕರಿಸುವ
ಶಕ್ತಿ ಕೊಡು ಎಂದು ಆ ಸರ್ವಶಕ್ತನಲಿ ಪ್ರಾರ್ಥನೆ
3 replies on “ಪುಟ್ಟಮ್ಮನಿಗೆ ಪುಟ್ಟ ಉಡುಗೊರೆ (ನವೆಂಬರ 19)”
ಶ್ರೀನಿವಾಸರೆ,
ನನ್ನ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯಗಳು.
ಮೂರು ದಿನ ಮೊದಲೇ ಸ್ವೀಟ್ಸ್ ಪಾರ್ಸೆಲ್ ಮಾಡಿಸಿ. ಇಲ್ಲದಿದ್ರೆ, ಅದು ಕೆಡದಂತಿರಲು ನೀವು ಏನೇನೋ ಸಿಂಪಡಿಸಿದ್ರೆ….????
🙂
Srinivas,
Putti nimma kavanadinda huttida varsha vannu tumba santosha dinda acharisiruttale…..nice kavana.
banangalor