ಅಮ್ಮ ಒಬ್ಬಳೇ ಎಲ್ಲರಿಗೂ – ಹಾಗೇ ನನಗೂ
ಅವಳ ನೆನೆಯಲು ಸುಖ ಮಿಶ್ರಿತ ದು:ಖ
ಅವಳು ಹತ್ತಿರ ಸುಳಿಯೇ ಮನಕಾನಂದ
ಜಗದಲಿ ನನಗವಳೇ ಸ್ಫುರದ್ರೂಪಿ
ಅಂದದ ದುಂಡು ಮುಖಕೆ ಅಂಟಿನ ಕುಂಕುಮ
ಕೆನ್ನೆಗೆ ಸುವಾಸಿತ ಅರಿಶಿನದ ಲೇಪನ
ಕೊರಳೆಂದೂ ಕಾಣಲಿಲ್ಲ ಒಂದಪರಂಜಿ ಚಿನ್ನ
ಎಂದಿಗೂ ಬಿಟ್ಟುಕೊಡಲಿಲ್ಲ ತನ್ನತನವನ್ನ
ಓಂನಾಮ ಕಲಿಸಿದವಳೇ ನೀನಲ್ಲವೇನಮ್ಮ
ಕೃಶಕಾಯನಿಗೆ ಹೆಚ್ಚಿನ ಆರೈಕೆ ನೀಡಿದೆಯಮ್ಮ
ಕೈತುತ್ತ ನೀಡಿ ಅಮೃತ ಉಣಿಸಿದವಳು
ನನ್ನ ಪುಂಡಾಟಿಕೆಯ ಸಹಿಸಿದವಳು
ಪೂಜೆಗೆ ಪಾರಿಜಾತ ಹೆಕ್ಕಿ ತರಿಸಿದವಳು
ಅದರಲಿ ಹಾರ ಮಾಡಲು ಕಲಿಸಿದವಳು
ಎಂದೂ ಕೈ ಚಾಚದಂತಹ ಪಾಠ ಕಲಿಸಿದವಳು
ಇತರರ ನೋವು ನನ್ನದೆಂದು ತೋರಿಸಿದವಳು
ಜೀವನದ ಮರ್ಮ ಅರುಹಿದ ಮಹಾತಾಯಿ
ಪೂಜೆ ಪುನಸ್ಕಾರದ ಪರಿ ಕಲಿಸಿದವಳು
ಇಲ್ಲದಿದ್ದರೂ ಕೊಡುಗೈ ಆಗಿಸಿದವಳು
ನಾನೆಂತು ತೀರಿಸಬಲ್ಲೆ ಆ ನಿನ್ನ ಮಾತೃ ಋಣ
ಅಪ್ಪನ ನೊಗಕೆ ಸಾಟಿಯಾಗಿ ಹೆಗಲು ಕೊಟ್ಟವಳು
ಎಂದಿಗೂ ಮಕ್ಕಳಿಂದ ನಿರೀಕ್ಷಿಸದವಳು
ಕಡುಬಡತನದಲೂ ಬಿಡಲಿಲ್ಲ ಸ್ವಾಭಿಮಾನ
ಲೋಕದಿಂದ ನಮಗೆ ತಂದಿತ್ತ ದೊಡ್ಡ ಬಹುಮಾನ
ನೀನಂದು ನನ್ನ ಬಿಟ್ಟು ಹೋದೆಯಲ್ಲ
ನೀ ಹೀಗೆ ಮೋಸಿಸುವೆಯೆಂದು ನಾ ತಿಳಿದಿರಲಿಲ್ಲ
ಒಂದು ಕ್ಷಣದ ನನ್ನ ಅಚಾತುರ್ಯ
ನೀ ತೀರಿಸಿದೆ ಇಹಲೋಕದ ಕಾರ್ಯ
ಮತ್ತೆ ಹೇಗೆ ನಾ ಸರಿಪಡಿಸಲಿ ನನ್ನ ತಪ್ಪು
ನಾ ನೀಡಲಾರೆನೆ ನಿನಗೊಂದು ಹಿಡಿ ಉಪ್ಪು
ಎಲ್ಲರ ಮನಗಳಲಿ ನಿನ್ನ ಕಾಣುತಿಹೆ
ಎಲ್ಲರಲಿ ನಿನ ಕಂಡು ಋಣ ತೀರಿಸುವೆ
ಶ್ರೀಗುರುದೇವದತ್ತಾಯ ನಮ:
4 replies on “ನೆನಪಿನಾಳದಿಂದ ಅಮ್ಮ”
>ಜಗದಲಿ ನನಗವಳೇ ಸ್ಫುರದ್ರೂಪಿ
ಎಂತಹ ಸತ್ಯದ ಮಾತು..ಅಮ್ಮ ಯಾವಾಗಲೂ ಹಾಗೇ
>ಒಂದು ಕ್ಷಣದ ನನ್ನ ಅಚಾತುರ್ಯ
ನೀ ತೀರಿಸಿದೆ ಇಹಲೋಕದ ಕಾರ್ಯ
ನಿಮಿಗಿಂತ ಕಿರಿಯ ನಾನು, ಆದರೂ ಎನೋ ತಿಳಿದದ್ದು ಹೇಳುತ್ತೇನೆ
ಪ್ರೀತಿಪಾತ್ರಳಾದ ಅಮ್ಮನನ್ನು ಕಳೆದುಕೊಂಡ ದುಃಖದಲ್ಲಿ ನಿಮ್ಮನ್ನು ನೀವು ಅಪರಾಧಿಪಾತ್ರದಲ್ಲಿ ನಿಲ್ಲಿಸಿಕೊಂಡಹಾಗಿದೆ.ನಿಮಗೆ ಜಗದ ವಿಧಿ ನಿಯಮ ಗೊತ್ತಲ್ಲವೇ? ನಾವೆಲ್ಲ ನಿಮಿತ್ತ ಮಾತ್ರ
ಆದರೆ ಅಮ್ಮ ಮರಳಿ ನಿಮ್ಮ ಮಗಳ ರೂಪದಲ್ಲಿ ಬಂದಿಲ್ಲವೇ?
srinivas,
kavithe hridaya sparshiyagide. rk narayan ondhu novelalli bareethare: “Mother is a precious commodity. yo know its worth only when it is gone” antha. thande-thayiyannu chikka vayassinalle kaledu konde. avara aashirvada, daivanugrahadinda thakkamattigiddene. ee kavithe odhi kannalli neerukki banthu.
devaru olithu maadali
vandanegalu
rk
saar channagide!!, bahala dhukkadinda bareda hage ide…devaru nimage olleyadannu madali
i am shivu