ವಿಭಾಗಗಳು
ಕವನಗಳು

ಹಕ್ಕಿಯ ಮನದಳಲು

ಚಿತ್ರಕವನದಲ್ಲಿ ಇರಿಸಿರುವ ಈ ಚಿತ್ರಕ್ಕೆ ನನ್ನ ಅನಿಸಿಕೆ

ಜಂಟಿ ಹಕ್ಕಿ
ಒಂಟಿ ಹಕ್ಕಿ
ಜೋಡಿ ಹಕ್ಕಿ
ಬೋಡಿ ಹಕ್ಕಿ
ಅಕ್ಕಿಯ ಹೆಕ್ಕುವ ಹಕ್ಕಿ
ಹಕ್ಕಿಯ ಹಕ್ಕನು ಅರಿತಿಹ ಹಕ್ಕಿ
ನಾ ಹಕ್ಕಿ ನೀ ಹಕ್ಕಿ
ಅಕ್ಕನೊಬ್ಬಳು ಹಕ್ಕಿ
ಅಣ್ಣನೊಬ್ಬನು ಹಕ್ಕಿ
ಅಮ್ಮ ಅಪ್ಪ ಹಕ್ಕಿ

ಎನ್ನ ಹಿಂದೆ ನೀ ಬಾರಾ
ಅವನ ಮೇಲೆ ನೀ ಏರು
ನಿಶ್ಶಕ್ತನ ಕೈ ಹಿಡಿದೆತ್ತು
ಗುರಿಯೊಂದನೇ ಕಾಣುವಾ

ಬಾಣದೋಪಾದಿಯಲಿ ನುಗ್ಗುವ
ಇಂದ್ರಚಾಪವ ಲೋಕಕೆ ತೋರುವಾ
ಮೇಲಿರುವುದು ತಂಪಿನ ಮೇಘ
ಅದರ ಮೇಲಿಹುದು ನಿಶ್ಶಕ್ತ ರವಿ

ಸುಡು ಸುಡು ಬಿಸಿಲು
ನೇಸರನ ಸಂಚು ರಣರಂಗವ ಮಾಡಲು
ಮೋಡಗಳು ಪ್ರಖರತೆಯ ತಡೆಯಲು
ಹೊರಟಿಹವು ಒಂದರ ಹಿಂದೊಂದು
ಸಾಥಿ ನೀಡಲು ಇರುವಾ ನಾವು ಕೆಳಗೆ
ಮೋಡಗಳು ಕಾಲು ಸೋತಾಗ
ರವಿಯ ಎದುರಿಸುವಾ
ಬನ್ನಿ ನಾವೆಲ್ಲ ಒಂದಾಗಿರುವಾ

ಬನ್ನಿ ಬನ್ನಿ ಓ ನೋಡುಗರೇ!!!
ಕತ್ತಲಾಗುತ್ತಿಲ್ಲ
ಮಲಗುವ ವೇಳೆಯಾಗುತ್ತಿಲ್ಲ
ಬಿರಿ ಬಿರಿ ಬಿರಿಯುತಿರುವ
ಭೂಮಿಗೆ ನೀರನುಣಿಸಲು
ಹೊರಟಿಹ ಮೋಡಗಳಿವು
ಸೂರಜನ ಮರೆಮಾಚುತಿಹವು
ಹೋಗದಿರಿ
ಮೋಸ ಹೋಗದಿರಿ
ಮನೆಗೆ ಹೋಗದಿರಿ
ನಿಮ್ಮೂಟವ ಹುಡುಕಿರಿ
ನಮ್ಮೊಡನೆ ಸಾಥಿಯ ನೀಡಿರಿ