ರಂಗಮ್ಮ
ನಿನಗೊಂದು ಆಸರೆ
ನನಗೊಂದು ಆಸರೆ
ಎನಗಿರುವುದು ನಿನಗಿಲ್ಲ
ನಿನಗಿರುವುದು ಎನಗಿಲ್ಲ
ನಿನಗಿಹುದು
ನೊಸಲಿನಲಿ ನಗುತಿಹ ಕುಂಕುಮವೇ ಆಸರೆ
ಎನಗೆ
ಕೈ ಹಿಡಿದು ನಿಲ್ಲಲು ಮರವೇ ಆಸರೆ
ಅದಿಲ್ಲವಾಗಲು ನಿನ್ನ
ಮಡಿಲ ಬೊಡ್ಡೆಯೇ ಆಸರೆ
ನಾನಾಗಬಲ್ಲೆನೇ ನಿನಗಾಸರೆ
ಲಕ್ಷ್ಮಮ್ಮ
ನಾ ನಿನಗೆ ಲಕ್ಕಿಯಾದರೇನು
ಪೂರ್ಣ ನರೆತಿಹ ಕೂದಲು
ಎನಗೆ
ಇನ್ನೂ ಎಳೆತನ ತೋರಿಸುತಿಹ
ಅರೆ ಕಪ್ಪಿರುವ ಕೂದಲು
ನಾ ಅಕ್ಕನಾದರೇನಂತೆ
ನೀನಲ್ಲವೇ ತಂಗಿ
ಜೀವನದಿ ಬೆಂದು ಬೇಯ್ದು ಬಸವಳಿದಳಿದ
ಜೀವನ ಮರ್ಮದ ಅರಿತ ನೀ ನನ್ನ ರಂಗಿ
ರಂಗಮ್ಮ
ನೀ ಅಕ್ಕ ನಾ ತಂಗಿ
ಆತ್ಮ ಒಂದೇ ಬೇರೆ ಬೇರೆ ಅಂಗಿ
ನಿನಗಿಹುದು ತಾಳಿ ಅರಿಶಿನ ಕುಂಕುಮ
ಭಾಗ್ಯ
ಹಿರಿಯ ಮುತ್ತೈದೆಗೆ ಹೂವೀಳ್ಯದಲಿ
ಮೊದಲ ಪ್ರಾಶಸ್ತ್ಯ
ಲಕ್ಷ್ಮಮ್ಮ
ನನ್ನ ಬಳಿಯಲಿರಲೇನಂತೆ
ಮಣ ಚಿನ್ನ
ಖಾಲಿ ಕೊರಳಿನ ಜೀವನವೇ ಚೆನ್ನ
ಏನಾದರೇನಂತೆ ನೀ ಅಕ್ಕ ನಾ ತಂಗಿ
ನಿನ್ನ ಪಕ್ಕದಲ್ಲಿರಲು ನಾನಾಗೆನು ಮಂಗಿ
2 replies on “ಅಕ್ಕ ತಂಗಿ ಸಂವಾದ”
ನಮಸ್ಕಾರ,
ಎಲ್ಲಿ ಅಜ್ಞಾತವಾಸಕ್ಕೆ ಹೊಗಿದ್ರಾ…. ಜೊರು ಫಾರಿನ್ ಟ್ರಿಪ್ ಮೂಗಿಸಿ ಕೆಲಸದಲ್ಲಿ ಬಿಜಿನಾ.
-ಅಮರ
Samvaada Tumba Chennaagide.
-Tejaswini Hegde (Manasa)