ವಿಭಾಗಗಳು
ಕವನಗಳು

ಕಿಟ್ಟಪ್ಪ ಹೋಗ್ಬಿಟ್ನ

ತೆ! ಅರ್ರೇ! ನಮ್ಮ ಕುಟುಂಬದ ಶುಭ ಕಾರ್ಯವೇ ಆಗಲಿ, ಅಶುಭ ಕಾರ್ಯವೇ ಆಗಲಿ, ಸಾಥಿ ಕೊಟ್ಟವ್ನು ಅಂದ್ರೆ ಕಿಟ್ಟಪ್ಪ. ಆಗೆಲ್ಲ ಹೆಚ್ಚು ತಿಳಿದವನಂತೆ, ಮಾರ್ಗದರ್ಶನ ಮಾಡಿದವನು ಅವ್ನೇ. ನಮ್ಮ ದೊಡ್ಡಣ್ಣನಿಗಿಂತ ಹದಿನೈದು ದಿನಗಳಷ್ಟು ಚಿಕ್ಕವನಾದ್ರೂ, ನಮ್ಮಪ್ಪ ಅಮ್ಮ ದೈವ ಅಧೀನರಾದಾಗ, ನಮ್ಮಣ್ಣನಿಗೂ ದಾರಿ ತೋರಿದವನು. ಅಂತಹವನು ನಮ್ಮ ಸೋದರಮಾವ. ಏನೇ ಶುಭ ಕಾರ್ಯವಾದ್ರೂ, ಅಶುಭ ಕಾರ್ಯವಾದ್ರೂ ಮೊದಲು ಕಿಟ್ಟಪ್ಪನಿಗೆ ತಿಳಿಸ್ಬೇಕು ಅಂತ ನಮ್ಮಮ್ಮ ಹೇಳ್ತಿದ್ರು. ಈಗ್ಯೆರಡು ವರುಷಗಳಿಂದ ನಾನು ಅವನನ್ನು ಭೇಟಿಯಾಗಿರಲಿಲ್ಲ. ಆದರೂ ಮೊನ್ನೆ ಮೊನ್ನೆ ಅವನೊಂದಿಗೆ ಮಾತನಾಡಿದನುಭವ. ಈಗವನು ನಮ್ಮೊಂದಿಗಿಲ್ಲ ಅಂದ್ರೆ ನಂಬೋಕ್ಕಾಗ್ತಿಲ್ಲ. ಮತ್ತೆ ಮಾತನಾಡಿಸ್ಬೇಕು ಅಂದ್ರೆ ಅವನು ನನಗಿನ್ನು ಸಿಗ್ತಾನಾ? ಹದಿನೈದು ದಿನಗಳ ಹಿಂದೆ ಬೆಂಗಳೂರಿಗೆ ಹೋಗಿದ್ದಾಗ ಅವನನ್ನು ಕಂಡು ಮಾತನಾಡಿಸ್ಬೇಕು ಅನ್ನೋ ಬುದ್ಧಿ ನನಗ್ಯಾಕೆ ಬರ್ಲಿಲ್ಲ.
ಅಲ್ಲ ಈಗವನು ಹೋಗಿದ್ದಾದ್ರೂ ಎಲ್ಲಿಗೆ. ಅವನು ಅಂದ್ರೆ ಯಾರು? ನನ್ನ ಮನದೊಂದಿಗೆ ಸಂವೇದಿಸಿದ ಚೇತನ, ಈಗೆಲ್ಲಿ? 😦
ನಮ್ಮನೇಲಿ ಅದೇನೇ ಶುಭ ಕಾರ್ಯ ಆದ್ರೂ ನಾಂದಿ ವೇಳೆಗೆ ಸರಿಯಾಗಿ, ಕೈನಲ್ಲೊಂದು ಚೀಲ ಹಿಡ್ಕೊಂಡು ಹಾಜರಾಗ್ತಿದ್ದ. ಅವನಿರೋಷ್ಟು ದಿನಗಳೂ ಗೋಳು ಹುಯ್ಕೊಂಡಿದ್ದು, ಈಗ ಮತ್ತೆ ಬಾ ಅಂದ್ರೆ ಬರ್ತಾನಾ? ಯಾರ ಮುಂದೆ ಹಲುಬುಕೊಳ್ಳಲಿ.

೫-೬ ವರ್ಷಗಳ ಹಿಂದೆ, ಮನಕ್ಕೆ ತೋಚಿದ್ದನ್ನು ಗೀಚಿದ್ದು, ಈಗಲೂ ಸರಿ ಅಂತ ನನ್ನ ಮನ ಹೇಳ್ತಿದೆ. ಅದು ಸರಿಯೇ?

ಎಲ್ಲಿಂದಲೋ ಬಂದ ಈ ಚೇತನಕೆ ಆತ್ಮ ಎನಲೇ
ಎಲ್ಲಿಂದಲೋ ಹುಟ್ಟಿ ಬಂದ ಈ ದೇಹಕೆ ನಾನು ಎನಲೇ

ಜೀವನ ಎಂಬೋ ಈ ಬಸ್ಸಿನಲ್ಲಿ ಎಲ್ಲೋ ಹತ್ತಿದೆ ನಾನು
ಹಾಲುಣಿಸಿ ಪಾಲಿಸಿದವಳ ಅಮ್ಮನೆಂದೆ
ಅವಳು ತೋರಿದವನ ಅಪ್ಪ, ಅಕ್ಕ, ತಂಗಿ, ಅಣ್ಣ, ತಮ್ಮನೆಂದೆ
ಅವಳು ಕಲಿಸಿದ ಮಾತನೇ ನಾ ನಂಬಿದೆ

ಈ ಬಸ್ಸಿನಲಿ ಎಲ್ಲೋ ಹತ್ತಿ ಎಲ್ಲೋ ಇಳಿವ ಸಹ ಪ್ರಯಾಣಿಕರಿಂದ
ಮಮತೆ ವಾತ್ಸಲ್ಯ ಪ್ರೇಮ ಪ್ರೀತಿ ಕರುಣೆ ಕ್ರೋಧ ಹಾಸ್ಯವ ಕಲಿತೆ
ಮಣ್ಣಿನ ವಾಸನೆತೆ ಮನದ ಕಾಮನೆಗಳಿಗೆ ದಾಸನಾದೆ
ಯಾವುದೋ ಹೆಣ್ಣಿನ ನಂಬಿದೆ, ಕೆಲ ಬಾರಿ ಮೋಸ ಹೋದೆ

ಸಹವರ್ತಿಗಳೊಡನೆ ನಕ್ಕೆ, ನಗಿಸಿದೆ, ಅತ್ತೆ, ಅಳಿಸಿದೆ
ಅವರನೇ ನಂಬಿ ಗೋಂದಿನಂತೆ ಅಂಟಿದೆ
ಅವರ ಸ್ಥಾನಕದಿ ಅವರಿಳಿಯೇ ಗೋಳಾಡಿ ಹೊರಳಾಡಿದೆ
ಆಸ್ತಿಕ ನಾಸ್ತಿಕನಂತೆ ನಾಟಕವಾಡಿ ದಿಕ್ಕಾಪಾಲಾಗಿ ಓಡಿದೆ

ಸಹವರ್ತಿ ತೋರಿದ ಕೂಸುಗಳ ಮಕ್ಕಳೆಂದೆ
ಅವರನೇ ನಂಬಿ ಆಶಾಗೋಪುರ ಕಟ್ಟಿದೆ
ಅವರು ಕೈ ಚೆಲ್ಲಿದಾಗ ಹುಚ್ಚನಾದೆ, ಎಲ್ಲರ ಶಪಿಸಿದೆ
ಕೊನೆಗೊಂದು ದಿನ ಬಂದಲ್ಲಿಗೇ ಇಳಿದು ಹೋದೆ