ಸುಮಾರು ತಿಂಗಳುಗಳಿಂದ, ನಮ್ಮ ಮನೆಯ ಅಡುಗೆ ಮನೆಯ ಕಿಟಕಿಯ ಹತ್ತಿರ, ಪ್ರತಿ ನಿತ್ಯವೂ ೮ ಘಂಟೆಯ ವೇಳೆಗೆ ಒಂದು ಕಾಗೆ ಬಂದು ಕುಳಿತುಕೊಳ್ಳುತ್ತದೆ. ಅದಕ್ಕೆ ತಿನ್ನಲೇನಾದರೂ ಹಾಕಲೇಬೇಕು. ಅಲ್ಲಿಯವರೆವಿಗೂ ಕಾ ಕಾ ಅಂತ ಅರಚುತ್ತಲೇ ಇರುತ್ತದೆ. ಮೊದ ಮೊದಲಿಗೆ ಬಿಸ್ಕತ್ ತಿನ್ನುತ್ತಿದ್ದದ್ದು, ನಂತರ ಅದು ಬಿಸ್ಕತ್ ಮುಟ್ಟದಾಯಿತು. ಮನೆಯಲ್ಲಿ ಮಾಡಿದ ಅಂದಿನ ತಿಂಡಿಯೇ ಹಾಕಬೇಕು. ಅದನ್ನು ಕಚ್ಚಿಕೊಂಡ ಮೇಲೆಯೇ ಹಾರಿ ಹೋಗುವುದು. ಕೆಲವೊಮ್ಮೆ ಇನ್ನೊಂದು ಕಾಗೆಯೂ ಬರುತ್ತದೆ. ಪೂರ್ವಜನ್ಮದಲ್ಲಿ ಇದೇನಾದರೂ ನಮ್ಮ ಸಂಬಂಧಿ ಆಗಿತ್ತೇ ಎಂಬ ಅನುಮಾನ ನನಗೆ. ವರುಷಕ್ಕೊಮ್ಮೆ ಶ್ರಾದ್ಧದ ದಿನ ಪೂರ್ವಜರಿಗೆ ಪಿಂಡ ಇಡುವುದು ವಾಡಿಕೆ. ಇಲ್ಲಿ ಪ್ರತಿ ನಿತ್ಯವೂ ಅದಕ್ಕೆ ತಿನ್ನಲಿಡಬೇಕು. ಮನಸ್ಸಮಾಧಾನ ಆಗಲು ಇದೊಂದು ಸದವಕಾಶ ಅನ್ನುವಿರಾ?
ವಿಭಾಗಗಳು