ಅನುಕಂಪವ ಗಳಿಸಲು
ನಗುವ ತಡೆದು ಅಳುವರು
ಕೆಲವೊಮ್ಮೆ
ಮನದಳಲ ಮರೆತು ನಗುವರು
ಮನೆ ಹೊಗುವರು – ಹೊಗೆದು
ಆಳಬಯಸುವರು
ಮನವ ಹೊಕ್ಕು
ವಿನಾಕಾರಣ ಆಳಿಸುವರು
ತಡಕಾಡುವರು
ಮನದಲಿ ಮಿಡುಕುವರು
ಹೃದಯವ ತಡಕುವರು
ತಡೆಯಿಲ್ಲದ ಎಡೆಯೂ
ಎಡವುವMತೆ ತಾಕುವರು
ಮನದಿಂಗಿತದಂತೆ ಇರಗೊಡದವರು
ತೊಡುವರ್ಯಾಕೀ ಕೃತಕ ವೇಷ?